ABOUT US
Local Flavour, International Reputation
Our country is well known globally for its home grown spices, and our cuisine is equally famous for its various spicy delicacies. Spices were imported from India to Europe and other parts of the world from medieval times. The evolution of spicy flavours and mixes, which later branched out to form the different regional cuisines, is well documented down the ages.
Abhiruchi Shetty Masala Products
One such culinary tradition is the spicy taste of Kundapura masalas. Abhiruchi masala products offer the authentic taste of these spice mixes that can convert simple dishes into flavourful works of culinary art. Known for their premium quality, the masalas are manufactured and marketed by Lakshmi Home Industries, situated in the coastal town of Kundapura in Karnataka. A range of products offer variety that lends itself to different styles of cooking.
A tale of true grit
The year was 1994.
Harsha Vardhan of Kundapura used to run a grocery store by the name Ganesh Bazar. She had an entrepreneurial streak in her that made her experiment with creating spice mixes in her home. She started to market them under the name Laxmi Masala, by enlisting the support of nearby shops. The positive response to these baby steps was the motivation for expanding the range of products. The masala mixes soon started gaining popularity at a regional level. Those who would go abroad from the region would seek out Laxmi Masala to carry along with them. Such was the loyalty that it gained from its clientele.
A star is born – Abhiruchi
Following the success in the regional market, as well as its popularity in the gulf countries, specifically, the UAE, the product line was renamed Abhiruchi. It was, by then, a recognized small scale industry. Today it offers 46 varieties of products. The products are available not only in states beyond Karnataka but also in countries such as UAE, Qatar, Bahrain and Australia.
Quality Control
Abhiruchi offers attractive flavour lock technology packaging in different variants, which increases the shelf life of the products. The use of the rational pounding technique for powdering retains the colour and flavour of the spices. The products are tested and certified by Bangalore Test House and Spice Board of India.
ಅಭಿರುಚಿ ಶೆಟ್ಟಿ ಮಸಾಲದ ಹಿಂದಿನ ಹೆಣ್ಣೊಬ್ಬಳ ಸ್ವಾಭಿಮಾನದ ಯಶೋಗಾಥೆ!
ಹೆಣ್ಣು ಅಂದ್ರೆ ಇನ್ನೇನು? ಅವಳು ಎಂದಿಗೂ ಅಡುಗೆಮನೆಯ ಸರಕು! ಹಾಗಂತ ಜಗತ್ತು ಹೆಣ್ಣನ್ನ ಅಡುಗೆ ಯಂತ್ರ ಎಂಬಂತೆ ಬ್ರಾಂಡ್ ಮಾಡಿದ ಕಾಲದಲ್ಲೇ ನಾನು ಹುಟ್ಟಿದ್ದು! ಬದುಕಿನ ಬಗ್ಗೆ ಕನಸು ನೇಯುವ ಹೊತ್ತಿಗಾಗಲೇ ಹರ್ಷವರ್ಧನ್ ಶೆಟ್ಟರನ್ನ ಮದುವೆಯಾದೆ. ನಮಗೆ ಇಬ್ಬರು ಮಕ್ಕಳು ಅಭಿಷೇಕ್ ಮತ್ತು ಧನಲಕ್ಷ್ಮಿ. ಅವರು ದೂರದ ಹೈದರಬಾದಿನಲ್ಲಿ ಉದ್ಯೊಗದಲ್ಲಿ ಇದ್ದರಾದ್ದರಿಂದ ಹುಟ್ಟಿದ ಊರು, ಮತ್ತು ಹಿರಿಯರ ಜೊತೆಗೇ ಇರೋಣ ಎಂದು ನಿರ್ಧರಿಸಿ ಊರಿಗೆ ಬಂದವರು ಕುಂದಾಪುರದಲ್ಲೊಂದು ದಿನಸಿ ಅಂಗಡಿ ಇಟ್ಟರು! ವ್ಯವಹಹಾರ ಕೈ ಹಿಡಿಯಿತು. ಬದುಕು ಸಂತ್ರಪ್ತಿಯಲ್ಲೇ ಇತ್ತು. ಆದರೂ ಹೆಣ್ಣಿನ ಸ್ವಾವಲಂಬನೆಯ ಬದುಕು ಎಂಬುದು ನನ್ನದೊಂದು ಕನಸಾಗಿತ್ತು. ಬದುಕಿನಲ್ಲಿ ಏನಾದರೂ ಸಾಧಿಸಲೇ ಬೇಕು ಎನ್ನುವ ಛಲ ಎದೆಯೊಳಗಿತ್ತು! ಆ ವಿಶ್ವಾಸವಷ್ಟೇ ನನ್ನ ಬದುಕಿನ ಬಂಡವಾಳವಾಗಿತ್ತು. ನನ್ನಂತಹ ಅದೆಷ್ಟೋ ಗ್ರಹಿಣಿಯರು ಧಾರವಾಹಿಯಲ್ಲಿ ಕಳೆದು ಹೋಗುವಾಗ ನಾನು ನನ್ನ ಕನಸಿನ ಬದುಕಿನ ಧ್ಯಾನದಲ್ಲಿದ್ದೆ! ಪ್ರಭಲವಾದ ಆಕಾಂಕ್ಷೆ ನಮ್ಮದಾದರೆ ಅದಕ್ಕೆ ಎಲ್ಲಿಂದಲೋ ಒಂದು ದಿಕ್ಕು, ದೆಸೆ ಬಂದೇ ಬರುತ್ತದೆ ಎನ್ನುವ ಮಾತಿನ ಹಾಗೆ ನನಗೂ ಹಾಗಿನದ್ದೊಂದು ದಿನ ಬಂದೇ ಬಿಟ್ಟಿತು. ಹೌದು; ಅದೊಂದು ದಿವಸ ನಮ್ಮ ಕಿರಾಣಿ ಅಂಗಡಿಯ ಒಣಮೆಣಸು ತುಂಬಿಟ್ಟ ಗೋಣಿ ಚೀಲದೊಳಗೆ ಪುಡಿ ಪುಡಿಯಾಗಿ ಬಿದ್ದ ಮೆಣಸಿನ ತುಣುಕುಗಳೇ ನನಗೆ ಪ್ರೆರಣೆ ಆದದ್ದು ಎಂದರೆ ನೀವು ನಂಬುತ್ತೀರಾ?
ಮೆಣಸಿನ ತುಣುಕುಗಳಲ್ಲಿ ಬದುಕು ಕಟ್ಟಿಕೊಂಡೆವು!
ಮೆಣಸು ಕಾಲಿಯಾದ ನಂತರ ಚೀಲದೊಳಗೆ ಪುಡಿ,ಪುಡಿಯಾದ ಮೆಣಸನ್ನು ಸುಮ್ಮನೇ ಕಸದ ಬುಟ್ಟಿಗೆ ಸುರುವಿ ಎಸೆಯುವ ಬದಲು ಇದನ್ನೇ ಯಾಕೆ ಮೆಣಸಿನ ಹುಡಿ ಮಾಡಕೂಡದು ಎನಿಸಿತು. ಅದನ್ನೇ ಹರ್ಷರಿಗೆ ಹೇಳಿದಾಗ ಅವರು ಸಣ್ಣಗೆ ನಕ್ಕರು! ಆದರೆ ನಾನು ನಗಲಿಲ್ಲ. ಮೆಣಸಿನ ತುಣುಕುಗಳಿಂದಲೇ ಚಿಕನ್ ಮಸಾಲ ಹುಡಿ ಮಾಡುವ ಸಂಸ್ಥೆ ಮಾಡುವ ಕನಸು ಹುಟ್ಟಿತು! ಕುಂದಾಪುರದ ಕೋಳಿ ಸಾರು ಜಗದ್ವಿಖ್ಯಾತ, ತಾಯಿಯಿಂದ ಕಲಿತ ಅಡುಗೆ ನನ್ನ ಅತ್ಯಂತ ಆಸಕ್ತಿಯ ಕೆಲಸ! ಹೆಣ್ಣು ಅಡುಗೆ ಮನೆಗೆ ಮಾತ್ರವೇ ಸೀಮಿತವಲ್ಲ ಅವಳು ಅಲ್ಲಿಂದಲೇ ಸಾಧಕಿಯಾಗಿಯೂ ಹೊಮ್ಮೆಬಹುದು ಎನ್ನುವ ಅಚಲ ವಿಶ್ವಾಸವಿತ್ತಲ್ಲಾ? ನಾನು ಹೆಚ್ಚು ಯೋಚಿಸಲಿಲ್ಲ. ಮಗಳು ಧನಲಕ್ಷ್ಮಿಯ ಹೆಸರಲ್ಲಿ ಚಿಕನ್ ಮಸಾಲ ಪೌಡರ್ ಮಾಡುವ ಸಂಸ್ಥೆ ಆರಂಭವಾಗಿಯೇ ಹೋಯಿತು. ಲಕ್ಷ್ಮಿ ಹೋಮ್ ಇಂಡಸ್ಟ್ರೀಸ್ ಹುಟ್ಟಿದ್ದು ಹಾಗೆ. ಮುಂದೆ ಅದು ನನ್ನ ಮಗ ಅಭಿಶೇಕ್ ಹೆಸರಿನಲ್ಲಿ ಅಭಿರುಚಿ ಎನ್ನುವ ಬ್ರಾಂಡ್ ನೇಮಿನಲ್ಲಿ ಜಗದಗಲ ಹಬ್ಬಿತು. ಒಂದು ಚಿಕನ್ ಮಸಾಲದಿಂದ ಆರಂಭಗೊಂಡ ನಮ್ಮ ಸಂಸ್ಥೆ ಇವತ್ತು ಐವತ್ತು ಪಾಡಕ್ಟ್ ಉತ್ಪಾದನೆ ಮಾಡುತ್ತಿದೆ, ಜಗತ್ತಿನ ಇಪ್ಪತ್ತೈದಕ್ಕೂ ಹೆಚ್ಚು ದೇಶಗಳಲ್ಲಿ ಅಭಿರುಚಿ ಮಸಾಲ ಘಮ ಬೀರುತ್ತಿದೆ.
ಬಾಡಿಗೆ ಮನೆಯಿಂದ ಸ್ವಂತ ಬೀಡಿಗೆ!
ಬಾಡಿಗೆ ಮನೆಯಲ್ಲೇ ಆರಂಭಗೊಂಡ ಸಂಸ್ಥೆ ಇದು. ಮಹಾನ್ ಯಾತ್ರೆಯೂ ಕೂಡ ಮೊದಲ ಹೆಜ್ಜೆಯಿಂದಲೇ ಆರಂಭಗೊಳ್ಳುವುದಲ್ಲವೆ? ಇವತ್ತು ಜಗದಗಲ ಹಬ್ಬಿದ ನಮ್ಮ ಅಭಿರುಚಿ ಶೆಟ್ಟಿ ಮಸಾಲ ಪ್ರಾಡಕ್ಟಿನ ಘಮದ ಹಿಂದಿರುವುದು ಅವಿರತವಾದ ಶ್ರಮ, ಅತ್ಯುತ್ತಮ ಗುಣಮಟ್ಟದ ಮಸಾಲ ಪದಾರ್ಥಗಳ ಬಳಕೆ, ನಾವು ನೇರವಾಗಿ ಹಳ್ಳಿಯ ರೈತನಿಂದಲೇ ಮೆಣಸನ್ನ ಖರೀದಿಸುತ್ತೇವೆ. ಮದ್ಯವರ್ತಿಗಳ ಲೂಟಿ, ಮತ್ತು ಕಲಬೆರಕೆ ಮಾಲುಗಳ ಹಾವಳಿಯಿಂದ ಇದಕ್ಕೆ ಮುಕ್ತಿ ಸಿಗುತ್ತದೆ ಅದೆಲ್ಲದಕ್ಕಿಂತ ಮುಖ್ಯವಾಗಿ ರೈತನ ಕೈಗೆ ನೇರವಾಗಿ ಆತನ ಬೆಳೆಯ ಬೆಲೆ ಸೇರಿದರೆ ಅವನ ಮೊಗದಲ್ಲಿ ಚಿಮ್ಮುವ ಸಂತೃಪ್ತಿಗೆ ಬೆಲೆಕಟ್ಟಲಾಗದು! ಅದರ ಜೊತೆಗೇ ತಾಜಾ ಪದಾರ್ಥಗಳು ನಮಗೆ ಲಭ್ಯವಾಗುತ್ತದೆ. ನಮ್ಮ ಮಸಾಲ ಪದಾರ್ಥಗಳ ಗುಣಮಟ್ಟದ ರಹಸ್ಯದಲ್ಲಿ ಇದೂ ಕೂಡ ಒಂದು.
ಸಂಸ್ಥೆ ಆರಂಭಿಸುವಾಗ ನನ್ನ ಜೊತೆಗೆ ಸಾಥಿಯಾಗಿ ನಿಂತದ್ದು ಬೇಬಿ. ಇಂದಿಗೂ ಅವಳು ನನ್ನ ಜೊತೆಗಿದ್ದಾಳೆ. ಬೇಬಿಯಂತಹ ಇಪ್ಪತ್ತೈದಕ್ಕೂ ಹೆಚ್ಚು ಮಹಿಳೆಯರಿಗೆ ಇದು ಸ್ವಾವಲಂಬನೆಯ ಬದುಕಿನ ಉದ್ಯೋಗವನ್ನ ನೀಡಿದೆ, ನೂರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಬೇಕು ಎನ್ನುವ ಗುರಿ ನನ್ನದು, ನಿಮ್ಮ ಹಾರೈಕೆ ಇದ್ದರೆ ಅದು ಸಾವಿರವೂ ಆದೀತು. ನಮ್ಮ ಸಂಬಂಧಿ ಗುರುಪ್ರಸಾದ್ ನಮ್ಮ ಸಂಸ್ಥೆಯ ಮಾರುಕಟ್ಟೆ ವಿಭಾಗವನ್ನ ಚಾಣಾಕ್ಷತನದಿಂದ ನಿಭಾಯಿಸಿದ್ದು, ಮೃದುಮನಸಿನ ಪತಿ ಹರ್ಷವರ್ಧನ ನನ್ನ ಎಲ್ಲಾ ಕನಸುಗಳಿಗೆ ಪ್ರೋತ್ಸಾಹಿಸುತ್ತಲೇ ಬೆಂಬಲವಾಗಿ ನಿಂತದ್ದು, ನಮ್ಮ ಉತ್ಕೃಷ್ಠ ಗುಣಮಟ್ಟ, ಪ್ರಾಮಾಣಿಕವಾದ ವ್ಯವಹಾರ, ನಿರಂತರ ಪರಿಶ್ರಮ ಇದೆಲ್ಲದರ ಒಟ್ಟು ಮೊತ್ತವೇ ನಮ್ಮ ಸಂಸ್ಥೆಯ ಯಶದ ಗುಟ್ಟು. Online ಮಾರುಕಟ್ಟೆಯಲ್ಲಿಯೂ ನಾವಿಂದು ಸಾವಿರಾರು ಮನೆಯನ್ನು ತಲುಪುತ್ತಿದ್ದೇವೆ. ಕನ್ನಡ-ಸಂಸ್ಕೃತಿ ಮತ್ತು ಮಹಿಳಾ-ಮಕ್ಕಳ ಕಲ್ಯಾಣ ಸಚಿವೆ ಜಯಮಾಲರವರು ಪುರಸ್ಕಾರ ಮಾಡುತ್ತಾ ಹೊದೆಸಿದ ಸನ್ಮಾನದ ಶಾಲು ಮತ್ತು ನೀಡಿದ ಪ್ರಶಸ್ತಿಯ ಫಲಕವನ್ನ ಸ್ವೀಕರಿಸುವಾಗ ಇದು ಹೆಣ್ಣೊಬ್ಬಳ ಕನಸಿಗೆ ಸಿಕ್ಕ ಫಲ ಎಂದೇ ಗೌರವದಿಂದ ವಿನೀತಳಾದೆ. ಕುಂದಾಪುರದ ಹಳ್ಳಿಯ ಹೆಣ್ಣೊಬ್ಬಳ ಕನಸೊಂದು ಇಷ್ಟು ಎತ್ತರದಲ್ಲಿ ನನಸಾದ ಬಗೆಗೆ ಖುಶಿ ಇದೆ. ನಿಮ್ಮ ಪ್ರೊತ್ಸಾಹವೂ ನಮ್ಮ ಮೇಲಿರಲಿ. ನನ್ನ ಕಾಲದ ಆಚೆಗೂ ಈ ಸಂಸ್ಥೆ ಎತ್ತರತ್ತೆರಕ್ಕೆ ಬೆಳೆಯಲಿ ಎಂಬುದೇ ಅನವರತವೂ ನನ್ನದೆಯಲ್ಲಿ ಮೊರೆಯುವ ಅನಂತವಾದ ಕನಸು